ರಾಜಕೀಯ ಸಮಗ್ರ ಸುದ್ದಿ

ರಾಜ್ಯದ 14 ಲೋಕ ಕ್ಷೇತ್ರ, 53 ನಾಮಪತ್ರ ವಾಪಸ್‌; ‘ಲೋಕ’ ಕಣದಲ್ಲಿ 247 ಅಭ್ಯರ್ಥಿಗಳು

Share It

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಕಣ ರಂಗೇರಿದೆ. ಸೋಮವಾರ 53 ಮಂದಿ ನಾಮಪತ್ರ ವಾಪಸ್‌ ಪಡೆದಿದ್ದು, ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಒಟ್ಟು 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ

ನಾಮಪತ್ರ ಹಿಂಪಡೆಯಲು ನೆನ್ನೆ (ಏ.8) ಕೊನೆ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ 6ನೇ ತಾರೀಖಿನಂದು ಒಬ್ಬರು ಹಾಗೂ ಇಂದು 52 ಮಂದಿ ಸೇರಿದಂತೆ ಒಟ್ಟು 53 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದಾರೆ. ಕಣದಲ್ಲಿ ಈಗ 247 ಅಭ್ಯರ್ಥಿಗಳಿದ್ದು, ಅವರ ಪೈಕಿ ಪುರುಷರು 226 ಹಾಗೂ ಮಹಿಳಾ ಅಭ್ಯರ್ಥಿಗಳು 21 ಮಂದಿ ಚುನಾವಣೆ ಎದುರಿಸಲಿದ್ದಾರೆ.

ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣಕ್ಕೆ?
ಉಡುಪಿ-ಚಿಕ್ಕಮಗಳೂರು: 10
ಹಾಸನ: 15
ದಕ್ಷಿಣ ಕನ್ನಡ: 9
ಚಿತ್ರದುರ್ಗ: 20
ತುಮಕೂರು: 18
ಮಂಡ್ಯ: 14
ಮೈಸೂರು: 18
ಚಾಮರಾಜನಗರ: 14
ಬೆಂಗಳೂರು ಗ್ರಾಮೀಣ: 15
ಬೆಂಗಳೂರು ಉತ್ತರ: 21
ಬೆಂಗಳೂರು ಕೇಂದ್ರ: 24
ಬೆಂಗಳೂರು ದಕ್ಷಿಣ: 22
ಚಿಕ್ಕಬಳ್ಳಾಪುರ: 29
ಕೋಲಾರ: 18

ಚಿಕ್ಕಬಳ್ಳಾಪುರ ದಲ್ಲಿ ಅತಿ ಹೆಚ್ಚು ಅಂದರೆ 29 ಅಭ್ಯರ್ಥಿ ಗಳು ಕಣದಲ್ಲಿದ್ದಾರೆ


Share It

You cannot copy content of this page