ಅಂದಹಾಗೆ ದೇವನಹಳ್ಳಿ ಸಮೀಪ ಕೆಂಪೇಗೌಡ ಏರ್ಪೋಟ್ ಇರುವ ಕಾರಣ ದೇವನಹಳ್ಳಿ ತಹಶಿಲ್ದಾರ್ ಗೆ ಬೇಡಿಕೆ ಹೆಚ್ಚು ಈ ಕಾರಣ
ತಹಶಿಲ್ದಾರ್ ಹುದ್ದೆಗಾಗಿ ಹಲವರ ಪೈಟ್ ನಡುವೆ ಮತ್ತೆ ತಹಶಿಲ್ದಾರ್ ಆಗಿ ಬಾಲಕೃಷ್ಣ ಆಯ್ಕೆಯಾಗಿದ್ದಾರೆ..

ದೇವನಹಳ್ಳಿ:
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿಗೆ ಸರ್ಕಾರ ನೂತನವಾಗಿ ತಹಶೀಲ್ದಾರ್ ನೇಮಕ ಮಾಡಿ ಆದೇಶ ಹೊರಡಿಸಿದೆ, ಇನ್ನು ಹಾಲಿ ತಹಶೀಲ್ದಾರ್ ಶಿವರಾಜ್ ವಯೋ ನಿವೃತ್ತಿ ಹಿನ್ನೆಲೆ, ನೂತನ ತಹಶೀಲ್ದಾರ್ ಆಗಿ ಬಾಲಕೃಷ್ಣ ನೇಮಕಗೊಂಡಿದ್ದಾರೆ.ಕಳೆದ ಒಂದು ವರ್ಷದಿಂದ ಎರಡು ಬಾರಿ ಬಾಲಕೃಷ್ಣ ನೇಮಕ ಮಾಡಿದ್ರು ಆಯ್ಕೆ ರದ್ದಾಗಿತ್ತು.
ಈ ಹಿಂದಿನ ತಹಶಿಲ್ದಾರ್ ಶಿವರಾಜ್ ಕೋರ್ಟ್ ಮೊರೆಹೋಗಿದ್ದ ಕಾರಣ ನೇಮಕ ರದ್ದಾಗಿತ್ತು..ಇದೀಗ ತಹಶೀಲ್ದಾರ್ ಶಿವರಾಜ್ ವಯೋ ನಿವೃತ್ತಿ ಹಿನ್ನೆಲೆ ನೂತನ ತಹಶೀಲ್ದಾರ್ ಆಗಿ ಬಾಲಕೃಷ್ಣರನ್ನ ಸರ್ಕಾರ ಆಯ್ಕೆ ಮಾಡಿ ಆದೇಶ ಹೊರಡಿಸಿದೆ..
