ಸಮಗ್ರ ಸುದ್ದಿ

ಇವಿಎಂ ಬಗ್ಗೆ ಅತಿಯಾದ ಅನುಮಾನ ಬೇಡ: ಸುಪ್ರೀಂ ಕೋರ್ಟ್ ಹೇಳಿಕೆ

Share It

ಎಲೆಕ್ಟ್ರಾನಿಕ್‌ ಮತಯಂತ್ರಗಳ ಮೂಲಕ ಚಲಾಯಿಸುವ ಮತಗಳ ಜತೆಗೆ ವಿವಿಪ್ಯಾಟ್‌ನಲ್ಲಿ ಮುದ್ರಿತ ಚೀಟಿಗಳನ್ನು ತಾಳೆ ಮಾಡಿ ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಅದರ ತೀರ್ಪನ್ನು ಗುರುವಾರ ಕಾಯ್ದಿರಿಸಿದೆ.

ಸಂಪೂರ್ಣ ವಿವಿಪ್ಯಾಟ್‌ನ ಮುದ್ರಿತ ಚೀಟಿಗಳನ್ನು ಎಣಿಕೆ ಮಾಡುವಂತೆ ಕೋರಿ ‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್’ (ಎಡಿಆರ್‌) ಸಂಸ್ಥೆ ಸೇರಿದಂತೆ ಇನ್ನೂ ಕೆಲ ವ್ಯಕ್ತಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾ. ಸಂಜೀವ್‌ ಖನ್ನಾ, ನ್ಯಾ. ದೀಪಂಕರ್‌ ದತ್ತಾ ಅವರಿದ್ದ ನ್ಯಾಯಪೀಠವು, ”ಒಂದು ಸುಸಜ್ಜಿತ ವ್ಯವಸ್ಥೆಯನ್ನು ಸಣ್ಣ ತಪ್ಪಿನ ಕಾರಣಕ್ಕೆ ಅನುಮಾನದಿಂದ ನೋಡಬಾರದು. ಇವಿಎಂ ವಿಚಾರದಲ್ಲಿ ಪ್ರತಿಯೊಂದು ಟೀಕಿಸುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ಪಟ್ಟಿದೆ


Share It

You cannot copy content of this page