ಯಲಹಂಕ:
ದಿನದಿಂದ ದಿನಕ್ಕೆ ಲೋಕಸಮರದ ಕಿಚ್ಚು ಹೆಚ್ಚಾಗ್ತಾನೆ ಇದೆ.. ಇನ್ನು ಚಿಕ್ಕಬಳ್ಳಾಪುರ ಲೋಕ ಸಭೆಗೆ ಸಂಬಂಧಿಸಿದಂತೆ ಯಲಹಂಕದಲ್ಲಿ ಇಂದು ಕಾರ್ಯಕರ್ತರ ಸಭೆಯನ್ನ ಮೊದಲ ಭಾರಿಗೆ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಹಾಗೂ ಯಲಹಂಕ ಶಾಶಕ ವಿಶ್ವನಾಥ್ ಹಾಜರಿದ್ದರು. ಇನ್ನೂ ಕಾರ್ಯಕರ್ತರ ಸಭೆ ಮುಗಿದ ಬಳಿಕ ಮಾಧ್ಯಮಗಳಿಗೆ ವಿಶ್ವನಾಥ್ ಪ್ರತಿಕ್ರಿಹಿಸಿದರು, ಸುಧಾಕರ್ ಅವರು ನನ್ನನು ಅನುಮಾನಿಸುವುದು ಬೇಡ ಈ ಇಂದೆ ನನಗೆ ಟಿಕೆಟ್ ಮಿಸ್ ಆಗಿದ್ದರಿಂದ ಯಲಹಂಕ ಕಾರ್ಯಕರ್ತರು ಸುಧಾಕರ್ ವಿರುದ್ಧ ಪ್ರತಿಭಟನೆ ಮಾಡಿದ್ದರು, ಇದನ್ನೇ ಸುಧಾಕರ್ ಮನಸ್ಸಿನಲ್ಲಿ ಇಟ್ಟುಕೊಂಡು ಈಗಾಗಲೇ ನಮ್ಮ ಹಿರಿಯ ನಾಯಕರಿಗೆ ಈ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ನನಗೆ ಗೊತ್ತಾಗಿದೆ. ಇದು ಮುಂದುವರೆಯುವುದು ಬೇಡ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದರು..ನಾನು ಕೇವಲ ಯಲಹಂಕ ಕ್ಷೇತ್ರದಲ್ಲಿ ಮಾತ್ರ ಮಾತಯಾಚನೆ ಮಾಡ್ತೀನೇ ಅದು ನರೇಂದ್ರಮೋದಿ ಹೆಸರಿನಲ್ಲಿ ಅಷ್ಟೇ ಮತ ಕೇಳುವುದು, ಕೆಲವರ ಹೆಸರೇಳಿ ವೋಟ್ ಬೀಳದಿದ್ದಾಗ ಅವರನ್ನು ಟಾರ್ಗೆಟ್ ಮಾಡ್ಬಾರ್ದು,ನನ್ನ ಮತ್ತು ನನ್ನ ಕಾರ್ಯಕರ್ತರ ಮೇಲೆ ಅನುಮಾನ ಬಿಡಬೇಕು, ಇಲ್ಲವಾದರೆ ಕೆಟ್ಟ ಸಂದೇಶ ಕೊಟ್ಟಂಗಾಗುತ್ತೆ, ಡಾ ಸುಧಾಕರ್ ನಮ್ಮನ ವಿಶ್ವಾಸಕ್ಕೆ ತೆಗೆದು ಕೊಂಡ್ರೆ ನಮ್ಮದು ವಿಶ್ವಾಸವಿರುತ್ತದೆ ಎಂದು ವಿಶ್ವನಾಥ್ ಟಾಂಗ್ ಕೊಟ್ಟರು.. ಇನ್ನು ಏಪ್ರಿಲ್ ರಂದು ದೇವನಹಳ್ಳಿ ಗೆ ಆಗಮಿಸುತ್ತಿರುವ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ತಮ್ಮ ಕ್ಷೇತ್ರದಿಂದ ಹತ್ತುಸಾವಿರ ಜನ ಹೊರಡುತ್ತೇವೆ ಎಂದು ತಿಳಿಸಿದ್ರು.
ನನ್ನಮೇಲೆ ಅನುಮಾನ ಬೇಡ ಸುಧಾಕರ್ ಗೆ ಎಸ್.ಆರ್.ವಿ ಟಾಂಗ್…!ನಾನು ಯಲಹಂಕ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡ್ತೀನಿ ಎಂದ ವಿಶ್ವನಾಥ್..!
