ಸಮಗ್ರ ಸುದ್ದಿ

ಬಿಎಂಟಿಸಿ ಬಸ್ನಲ್ಲಿ ಪರಿಸರ ಪ್ರೇಮ ಮೆರೆದ ಚಾಲಕ..ಪರಿಸರ ಉದ್ಯಾನವನ ಬಿಎಂಟಿಸಿ ಬಸ್ಗೆ ಪ್ರಯಾಣಿಕರು ಪಿಧಾ..!

Share It

ದೇವನಹಳ್ಳಿ:
ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಜನ ಪ್ರಯಾಣ ಮಾಡಬೇಕಾದ್ರೆ ಕೆಲವರಿಗೆ ತುಂಬಾ ಬೋರೊ ಬೋರು…. ಆದ್ರೆ ಇಲ್ಲೊಂದು ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡಬೇಕಾದ್ರೆ ವಿದ್ಯಾರ್ಥಿಗಳು ಹಾಗೆ ಜನರು ಮುಗಿ ಬಿಳ್ತಾರೇ. ಯಾಕೇಂದ್ರೆ ಆ ಬಸ್ ನಲ್ಲಿ ಚಾಲಕ ವಿಭಿನ್ನ ಪರಿಸರ ಪ್ರೇಮ ಮೆರೆದಿದ್ದಾನೆ. ಜೊತೆಗೆ ಪ್ರಯಾಣಿಕರ ದಾಹವನ್ನ ನಿಗಿಸುತ್ತಿದ್ದಾನೆ.

ಅಂದಹಾಗೆ ದೇವನಹಳ್ಳಿಯಿಂದ ಹೊಸಕೋಟೆಗೆ ತೆರಳುವ ಬಿಎಂಟಿಸಿ ಡಿಪೋ 50 ರಲ್ಲಿ ಕೆಲಸ ಮಾಡೋ ಚಾಲಕ ಲೋಕೇಶ್ ಎಂಬಾತ ತಾನು ಓಡಿಸುವ ಬಸ್ನಲ್ಲಿ ಪರಿಸರ ಪ್ರೇಮ ಮೆರೆದಿದ್ದಾನೆ. ಬಸ್ನ ಮುಂಭಾಗ ಹಲವು ಬಗೆಯ ಗಿಡಗಳು ಪಾಟ್ಗಳನ್ನಿಟ್ಟು ಒಳ್ಳೆಯ ವಾತಾವರಣ ಸೃಷ್ಟಿ ಮಾಡಿದ್ದಾನೆ. ಅಮೃತಬಳ್ಳಿ, ಮನಿ ಪ್ಲಾಂಟ್ ಸೇರಿದಂತೆ ಹಲವು ಬಗೆಯ ಗಿಡಗಳಿಟ್ಟು ಬಸ್ನಲ್ಲಿ ಪರಿಸರದ ಪಸರನ್ನ ಭಿತ್ತಿದ್ದಾನೆ. ಇನ್ನೂ ಪರಿಸದ ಬಗ್ಗೆ ಕಾಳಜಿ ಹೊಂದಿರೋ ಲೊಕೇಶ್ ತಾನು ಕೂಡ್ ಬಸ್ನಲ್ಲಿ ಪರಿಸರ ಉದ್ಯಾನ ಸೃಷ್ಟಿಸುವ ಮೂಲಕ ಬೇರೆಯವರಿಗೂ ಮಾದರಿಯಾಗಿದ್ದಾನೆ. ಬಸ್ನಲ್ಲಿ ಹಸಿರು ಇದ್ದರೇ ಅದನ್ನ ನೋಡಿಕೊಂಡು ಬಸ್ ಓಡಿಸೋದೆ ಒಂದು ಉಲ್ಲಾಸ. ಜೊತೆಗೆ ಪ್ರಯಾಣಿಕರ ಮನಸ್ಸಿಗು ಪರಿಸರ ಹಸಿರು ಒಂದು ರೀತಿಯಲ್ಲಿ ಸಮಾಧಾನ ಅನ್ನೋದು ಚಾಲಕನ ಪರಿಸರ ಪ್ರೇಮದ ಮಾತಾಗಿದೆ.

ಅಂದಹಾಗೆ ಒಂದ್ಕಡೆ ಬಸ್ನಲ್ಲಿ ಪರಿಸರ ಉದ್ಯಾನ ಮಾಡಿರೋ ಚಾಲಕ ಉರಿ ಬಿಸಿಲಿನಲ್ಲಿ ಬರೋ ಪ್ರಯಾಣಿಕರಿಗೆ ಕುಡಿಯೋ ನೀರಿನ ವ್ಯವಸ್ಥೆ ಕೂಡ ಮಾಡಿದ್ದಾನೆ. ದೇವನಹಳ್ಳಿಯಿಂದ ಹೊಸಕೋಟೆ, ಹೊಸಕೋಟೆಯಿಂದ ದೇವನಹಳ್ಳಿಗೆ ಟ್ರಿಪ್ ಬಸ್ ಓಡಿಸುವ ಚಾಲಕ ಲೊಕೇಶ್ ಎರಡು ಕ್ಯಾನ್ಗಳಲ್ಲಿ 50 ಕ್ಕೂ ಹೆಚ್ಚು ಲೀಟರ್ ನೀರು ತುಂಬಿಕೊಂಡು ಬಸ್ನಲ್ಲಿಟ್ಟಿದ್ದಾನೆ. ಯಾರೇ ಬಿಸಿಲಿನಲ್ಲಿ ಓಡಾಡಿಕೊಂಡು ಬಸ್ಗೆ ಬಂದಾಗ ದಾಹವಾದ್ರೆ, ಬಸ್ನ ನಿರ್ವಾಹಕ ನೀರಿನ ಕ್ಯಾನ್ನಲ್ಲಿ ಕುಡಿಯೋ ನೀರು ಕೊಟ್ಟು ದಾಹವನ್ನ ನಿಗಿಸುತ್ತಾ ಸಾರ್ಥಕತೆ ಮೆರೆಯುತ್ತಿದ್ದಾನೆ.

ಇನ್ನೂ ಇದೇ ಬಸ್ನಲ್ಲಿ ಪ್ರಯಾಣ ಮಾಡಲು ವಿದ್ಯಾರ್ಥಿಗಳು, ಹಿರಿಯರು, ಕೆಲಸಕ್ಕೆ ತೆರಳುವ ಮಂದಿ ಮುಗಿ ಬಿಳ್ತಾರೆ. ಜೊತೆಗೆ ಬಿಎಂಟಿಸಿ ಬಸ್ ಚಾಲಕನ ಪರಿಸರ ಪ್ರೇಮ, ಪ್ರಯಾಣಿಕರ ಕಾಳಜಿ ಬಗ್ಗೆ ವಿದ್ಯಾರ್ಥಿಗಳು ನಾಗರೀಕರು ಖುಷಿ ವ್ಯಕ್ತಪಡಿಸುತ್ತಾರೆ
ಒಟ್ಟಿನಲ್ಲಿ ಸಿಲಿಕಾನ್ ಸಿಟಿಯ ಸಾವಿರಾರು ಬಿಎಂಟಿಸಿ ಬಸ್ನಲ್ಲಿ ಇಲ್ಲದ ಪರಿಸರ ಪ್ರೇಮ, ಒಳ್ಳೆಯ ಉದ್ಯಾನವನ್ನ ಬಸ್ನಲ್ಲಿ ಸೃಷ್ಟಿಸಿ ಎಲ್ಲಾ ಚಾಲಕರಿಗೂ ಲೊಕೇಶ್ ಮಾದರಿಯಾಗಿದ್ದಾನೆ. ಜೊತೆಗೆ ಬಿಸಿಲಿನ ತಾಪಮಾನ ಏರಿಕೆಯಿಂದ ಸೊರಗಿ ಬಸ್ನಲ್ಲಿ ಪ್ರಯಾಣಿಸುವ ಜನರ ದಾಹವನ್ನ ನಿಗಿಸಲು ಕುಡಿಯೋ ನೀರಿನ ವ್ಯವಸ್ಥೆ ಮಾಡಿರೋದು ನಿಜಕ್ಕೂ ಈ ಚಾಲಕನ ಕಾರ್ಯ ಶ್ಲಾಘನೀಯ ಹಾಗೂ ಪ್ರಶಂಸನೀಯ.


Share It

You cannot copy content of this page